ಬೆರ್ನೀ, ಫ್ರಾಂಚೆಸ್ಕೊ
1497-1536. ಇಟಲಿಯ ಕವಿ, ವಿಡಂಬನಕಾರ. ದಾಂಟೆ ಬಳಸಿಕೊಂಡ ಟೆರ್‍ಜಾ ರಿಮಾ ಛಂದಸ್ಸಿನಲ್ಲಿ ಕ್ಯಾಪಿಟೋಲೆ ಎಂಬ ವಿಡಂಬನಗಳನ್ನು ರಚಿಸಿದ. ಇವುಗಳಲ್ಲಿ ತನ್ನ ಕಾಲದ ರಾಜಾಸ್ಥಾನದ ವೈದ್ಯರು, ಚರ್ಚಿನ ಅಧಿಕಾರಿಗಳು, ಇತರ ಸಾಮಾಜಿಕ ಆಷಾಡಭೂತಿಗಳನ್ನು ಗೇಲಿ ಮಾಡಿದ್ದಾನೆ. ಬಯಾರ್ಡೊ ಎಂಬ ಇಟಲಿ ಕವಿಯ ಆರ್ಲಾಂಡೋ ಇನ್ನ ಮೊರಾಟೊ (ಪ್ರೇಮಿ ಆರ್ಲಾಂಡೋ) ಎಂಬ ಕಥನ ಕವನವನ್ನು ನಯವಾದ ಟಸ್ಕನಿ ಭಾಷೆಯಲ್ಲಿ ಪರಿಷ್ಕರಿಸಿದ. 		
	(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ